ಬೈರಿಗೆ

	ಕತ್ತರಿಸಲು ಎರಡು ಅಥವಾ ಹೆಚ್ಚು ಅಲಗು ಅಥವಾ ಅಂಚು ಇದ್ದು ಗಟ್ಟಿ ವಸ್ತುವಿನ ಮೇಲೆ ಲಂಬೀಯವಾಗಿ ಒತ್ತಡ ಹೇರಿ ಆವರ್ತಿಸಿದಾಗ ಆ ವಸ್ತುವಿನಲ್ಲಿ ತೂತು ತೊರೆಯುವ ಸಲಾಗಿ ಮಾದರಿಯ ಸಾಧನ (ಡ್ರಿಲ್).

	ಕಾಲಿಕ್ಸ್ ಬೈರಿಗೆ : ಅತಿ ಕಠಿಣ ಉಕ್ಕಿನ ಅಲಗು ಅಥವಾ ವಜ್ರದ ಮೊನೆ ಇರುವ ದೃಢ ಸಾಧನ.  180 ಸೆಂಮೀ ಗಿಂತಲೂ ಜಾಸ್ತಿ ವ್ಯಾಸ ಇರುವ ರಂಧ್ರ ಕೊರೆಯಬಲ್ಲದು. ಭೂಮಿಯ ಆಳಸ್ತರಗಳ ಜೀವುಂಡಿಗೆ ಪರೀಕ್ಷೆಗೆ ಬಳಸುವ ಉಪಕರಣವಿದು.  ಪೆಟ್ರೋಲಿಯಮ್ ಅನ್ವೇಷಣೆಯಲ್ಲಿ ಇದರ ಉಪಯೋಗವಿದೆ.

	ಎಂಪೈರ್ ಬೈರಿಗೆ : ಅದುರು ಅನ್ವೇಷಣೆಯಲ್ಲಿ ರಂಧ್ರಗಳನ್ನು ಕೊರೆಯಲು ಬಳಸುವ ಸಾಧನ.  ಇದರ ಕೆಳ ತುದಿಯಲ್ಲಿ ಕತ್ತರಿಸುವ ಹಲ್ಲುಗಳೂ ಮೇಲ್ಭಾಗದ ತುದಿಯಲ್ಲಿ ಉಕ್ಕಿನ ವೇದಿಕೆಯೂ ಇವೆ.  ಬೈರಿಗೆ ಸುಲಭವಾಗಿ ಆವರ್ತಿಸಲು ಅನುಕೂಲವಾಗುವಂತೆ ವೇದಿಕೆಯ ಕೆಳಗಡೆ ಸುತ್ತುವ ಕೈಪಿಡಿಯನ್ನು ಅಳವಡಿಸಿದೆ.  ವೇದಿಕೆಯ ಮೇಲೆ ಸಾಕಷ್ಟು (ಸುಮಾರು 40-50 ಜನ) ಕಾರ್ಯ ನಿರತರಾಗಿರುತ್ತಾರೆ.
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ